ಶಿವ ರಾತ್ರಿ ಯಾವಾಗ ಪ್ರಾರಂಭ ಮಾಡಬೇಕು

ಪ್ರಮುಖ ಮುಖ್ಯಾಂಶಗಳು
ಮಹಾ ಶಿವರಾತ್ರಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ
ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುದರ್ಶಿಯಂದು ಭಕ್ತಿಯಿಂದ ಆಚರಿಸಲಾಗುತ್ತದೆ
ಈ ದಿನದಂದು ಶಿವ ಮತ್ತು ಪಾರ್ವತಿಯ ವಿವಾಹ ಮಹೋತ್ಸವ ನಡೆದಿದ್ದರಿಂದ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ
ಶಿವರಾತ್ರಿಯಂದು ಭಕ್ತರು 'ಉಪವಾಸ' ಮತ್ತು 'ಜಾಗರಣೆ' ಮೂಲಕ ಶಿವನನ್ನು ಆರಾಧಿಸುತ್ತಾರೆ
Maha Shivratri: ಮಹಾ ಶಿವರಾತ್ರಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುದರ್ಶಿಯಂದು ಭಕ್ತಿಯಿಂದ ಆಚರಿಸಲಾಗುತ್ತದೆ. 

ಪುರಾಣಗಳ ಪ್ರಕಾರ, ಈ ದಿನದಂದು ಶಿವ ಮತ್ತು ಪಾರ್ವತಿಯ ವಿವಾಹ ಮಹೋತ್ಸವ ನಡೆದಿದ್ದರಿಂದ ಶಿವರಾತ್ರಿಯನ್ನು ಶಿವನಿಗೆ ಅತ್ಯಂತ ಪ್ರಿಯವಾದ ದಿನವೆಂದು ಕರೆಯಲಾಗುತ್ತದೆ. ಈ ಹಬ್ಬದಂದು ದೇಶಾದ್ಯಂತ ಜನರು ಬಹಳ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ. ಆದಾಗ್ಯೂ, ಈ ರೀತಿ ಮಾಡುವುದರಿಂದ ಪಾಪಗಳ ನಿವಾರಣೆ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಮೋಕ್ಷದಂತಹ ಪ್ರಯೋಜನಗಳು ದೊರೆಯುತ್ತವೆ ಎಂದು ನಂಬಲಾಗಿದೆ.
ಹಿಂದೂ ಧರ್ಮದ ಪ್ರಕಾರ, ಶಿವರಾತ್ರಿಯಂದು ಭಕ್ತರು 'ಉಪವಾಸ' ಮತ್ತು 'ಜಾಗರಣೆ' ಮೂಲಕ ಶಿವನನ್ನು ಆರಾಧಿಸುತ್ತಾರೆ. ರಾತ್ರಿಯ ಪೂರ್ತಿ ನಾಲ್ಕು ಜಾವಗಳಲ್ಲಿ ಶಿವಲಿಂಗಕ್ಕೆ ಅಭಿಷೇಕ ಹಾಗೂ ಬಿಲ್ವಾರ್ಚನೆ ಮಾಡುವುದರ ಮೂಲಕ ಶಿವನನ್ನು ಆರಾಧಿಸುತ್ತಾರೆ. ಆದಾಗ್ಯೂ, ಈ ವರ್ಷ, ಫಾಲ್ಗುಣ ಕೃಷ್ಣ ಚತುರ್ದಶಿಯು ಫೆಬ್ರವರಿ 15 ರಂದು ಪ್ರಾರಂಭವಾಗಿ ಫೆ.16 ರಂದು ಕೊನೆಗೊಳ್ಳುವುದರಿಂದ ಹಬ್ಬದ ದಿನಾಂಕ ಅನೇಕ ಜನರನ್ನು ಗೊಂದಲಕ್ಕೀಡು ಮಾಡಿದೆ. ಗೊಂದಲವನ್ನು ಪರಿಹರಿಸಿಕೊಳ್ಳಲು ಹಲವಾರು ಮಂದಿ ಗೂಗಲ್ನತ್ತ ಮೊರೆ ಹೋಗಿದ್ದಾರೆ. ಹಾಗಿದ್ರೆ, ಮಹಾಶಿವರಾತ್ರಿ ಯಾವಾಗ? ಇಲ್ಲಿದೆ ನೋಡಿ ಉತ್ತರ...
ಗೂಗಲ್ನಲ್ಲಿ ಭಾರೀ ಸದ್ದು ಮಾಡಿದ ಶಿವರಾತ್ರಿ! 
ಶಿವರಾತ್ರಿ ಸಮಯ ಹತ್ತಿರ ಬರುತ್ತಿದ್ದಂತೆಯೇ, ಅನೇಕ ಜನರು ಗೂಗಲ್ನಲ್ಲಿ ಶಿವರಾತ್ರಿ ಯಾವಾಗ? ಪೂಜಾ ಮುಹೂರ್ತ ಯಾವಾಗ? ಎಂದು ಹುಡುಕಾಡಲು ಪ್ರಾರಂಭಿಸಿದ್ದಾರೆ. 
ದೃಕ್ ಪಂಚಾಂಗದ ಪ್ರಕಾರ, ಈ ವರ್ಷ ಮಹಾ ಶಿವರಾತ್ರಿಯನ್ನು ಭಾನುವಾರ (ಫೆ.15) ಆಚರಿಸಲಾಗುತ್ತದೆ . ಹಿಂದೂ ಸಂಪ್ರದಾಯದಲ್ಲಿ, ಮಧ್ಯರಾತ್ರಿ ವೇಳೆ ಚತುರ್ದಶಿ ತಿಥಿ ಬರುವ ದಿನದಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಶಿವರಾತ್ರಿಯ 4 ಜಾವಗಳ ಪೂಜಾ ವಿವರ
* ರಾತ್ರಿ ಮೊದಲ ಪ್ರಹಾರ ಪೂಜೆ ಸಮಯ: 06:11 PM ರಿಂದ 09:23 PM
* ರಾತ್ರಿ ಎರಡನೇ ಪ್ರಹಾರ ಪೂಜೆ ಸಮಯ: 09:23 PM ರಿಂದ 12:35 AM, (ಫೆ. 16)
* ರಾತ್ರಿ ಮೂರನೇ ಪ್ರಹಾರ ಪೂಜೆ ಸಮಯ: 12:35 AM ನಿಂದ 03:47 AM, (ಫೆ. 16)
* ರಾತ್ರಿ ನಾಲ್ಕನೇ ಪ್ರಹಾರ ಪೂಜೆ ಸಮಯ: 03:47 AM ನಿಂದ 06:59 AM, (ಫೆ. 16)
ಪೂಜಾ ವಿಧಿ ಮತ್ತು ಆಚರಣೆಗಳು
1. ಬೆಳಗಿನ ಆಚರಣೆಗಳು: ಬೆಳಿಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ ಶುದ್ಧವಾದ ಬಟ್ಟೆಯನ್ನು ಧರಿಸಿ
2. ಅಭಿಷೇಕ: ಶಿವಲಿಂಗವನ್ನು ನೀರು, ಹಾಲು, ಜೇನುತುಪ್ಪ, ಮೊಸರು ಮತ್ತು ತುಪ್ಪದಿಂದ ಅರ್ಚನೆ ಮಾಡಿ
3. ನೈವೇದ್ಯಗಳು: ಬಿಲ್ವಪತ್ರೆ, ಹಣ್ಣುಗಳು, ಹೂವುಗಳು ಮತ್ತು ಧೂಪದ್ರವ್ಯವನ್ನು ಲಿಂಗಕ್ಕೆ ಅರ್ಪಿಸಿ
4. ಮಂತ್ರ ಪಠಣ: ಓಂ ನಮಃ ಶಿವಾಯ ಮತ್ತು ಇತರ ಶಿವ ಮಂತ್ರಗಳನ್ನು 108 ಬಾರಿ ಪಠಿಸಿ
5. ರಾತ್ರಿ ಜಾಗರಣೆ: ರಾತ್ರಿಯಿಡೀ ಎಚ್ಚರವಾಗಿದ್ದು ಮತ್ತು ಧ್ಯಾನ ಮಾಡಿ 
6. ಉಪವಾಸ ಮುರಿಯಿರಿ: ಫೆಬ್ರವರಿ 16 ರಂದು ಸೂರ್ಯೋದಯದ ನಂತರ ಲಘು ಆಹಾರವನ್ನು ಸೇವಿಸಿರಿ
ಮಹಾ ಶಿವರಾತ್ರಿಯ ಮಹತ್ವ
ಮಹಾ ಶಿವರಾತ್ರಿ ಹಿಂದೂ ಧರ್ಮದಲ್ಲಿ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದನ್ನು ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ಆಚರಿಸಲಾಗುತ್ತದೆ. ಶಿವಪುರಾಣದ ಪ್ರಕಾರ, ಈ ದಿನದಂದು ಶಿವ-ಪಾರ್ವತಿ ವಿವಾಹವಾಯಿತು. ಜೊತೆಗೆ ಸಮುದ್ರ ಮಂಥನದಲ್ಲಿ ಹಾಲಾಹಲ ವಿಷವನ್ನು ಶಿವನು ಕುಡಿದು ಜಗತ್ತನ್ನು ರಕ್ಷಿಸಿದನು. ಹಾಗಾಗಿ ಈ ಹಬ್ಬದಂದು ಭಕ್ತರು ದಿನವಿಡೀ ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ, ಶಿವಲಿಂಗಕ್ಕೆ ಅಭಿಷೇಕ, ಬಿಲ್ವಪತ್ರ ಅರ್ಪಣೆ ಮಾಡಿ ಓಂ ನಮಃ ಶಿವಾಯ ಎಂದು ಜಪಿಸುತ್ತಾರೆ. ಇದರಿಂದ ಪಾಪಗಳು ನಿವಾರಣೆಯಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ

Comments

Popular posts from this blog

🟡 ಬಂಗಾರ (Gold) ಮತ್ತು ⚪ ಬೆಳ್ಳಿ (Silver) – ಇತಿಹಾಸ, ಬೆಲೆ ಮತ್ತು ನಿರ್ಧಾರ

ಸಿಂಹ ರಾಶಿ ಭವಿಷ್ಯ: ಇಂದು ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆಯೇ?